
2nd April 2025
ಲಿಂಗಸೂರ: ಲಿಂಗಸುಗೂರು ತಾಲೂಕಿನ ಸ.ಕಿ.ಪ್ರಾ ಶಾಲೆ ರಾಂಪುರ (ಭೂ)ದಲ್ಲಿ ವನಸಿರಿ ಪೌಂಡೇಷನ್ ಸಹಕಾರದಿಂದ ಹಮ್ಮಿಕೊಂಡಿರುವ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಕಟ್ಟುವುದರ ಮೂಲಕ ಎಪ್ರೀಲ್ ಕೂಲ್ ಕಾರ್ಯಕ್ರಮವನ್ನು ಆಚರಿಸಲಾಯಿತು.
ದಿನೇ ದಿನೇ ಏರುತ್ತಿರುವ ಬೇಸಿಗೆ ಬಿಸಿಲಿನ ತಾಪದಿಂದ ಪ್ರಾಣಿ ಪಕ್ಷಿಗಳು ನೀರಡಿಸಿ , ಬಿರು ಬಿಸಿಲಿಗೆ ಪ್ರಾಣ ಕಳೆದುಕೊಳ್ಳುವ ಸ್ಥಿತಿಗೆ ತಲುಪಿವೆ.ಇಂಥ ಸ್ಥಿತಿಯಲ್ಲಿ ಬುದ್ಧಿಜೀವಿಗಳಾದ ನಾವು ಮನುಷ್ಯರು ಈ ಏಪ್ರಿಲ್ ತಿಂಗಳಲ್ಲಿ ಎಪ್ರಿಲ್ ಫೂಲ್ ಮಾಡುವ ಬದಲು ಏಪ್ರಿಲ್ ಕೂಲ್ ಮಾಡುವ ವನಸಿರಿ ತಂಡದ ಕಾರ್ಯ ಶ್ಲಾಘನೀಯ. ನೀವೂ ಕೂಡಾ ಎಪ್ರಿಲ್ ಫೂಲ್ ಮಾಡುವ ಬದಲು ಏಪ್ರಿಲ್ ಕೂಲ್ ಎಂದು ಮಕ್ಕಳಿಗೆ ತಿಳಿ ಹೇಳುವುದರೊಂದಿಗೆ ಮರಗಳ ಟೊಂಗಿಗಳಿಗೆ ನೀರಿನ ಅರವಟ್ಟಿಗೆ ಕಟ್ಟುವುದರ ಮೂಲಕ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ನಿಜಕ್ಕೂ ಅದ್ಭುತ ಎಂದು ಶಾಲೆಯ ಮುಖ್ಯ ಗುರುಗಳಾದ ಶರಣಬಸಪ್ಪ ಮುಂಡರಗಿಯವರು ತಿಳಿಸಿದರು.
ನಂತರ ಶಾಲೆಯ ಶಿಕ್ಷಕ ನಾಗರಾಜ ಮಾಂಡ್ರೆ ಮಾತನಾಡಿ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ನಿರ್ಮಿಸಿ ಯುವಕ ಯುವತಿಯರನ್ನು ಪರಿಸರದಡೆಗೆ ಸೆಳೆಯಲು ವನಸಿರಿ ಪೌಂಡೇಷನ್ ತಂಡ ಎಪ್ರೀಲ್ ಪೂಲ್ ಬದಲಿಗೆ ಎಪ್ರೀಲ್ ಕೂಲ್ ಕಾರ್ಯಕ್ರಮ ಹಮ್ಮಿಕೊಂಡಿರುವುದು ಒಂದು ಅದ್ಭುತವಾದ ಕಾರ್ಯ.ಸರಕಾರಿ ಶಾಲೆಗೆ ಅರವಟ್ಟಿಗೆ ನೀಡಿ ಅರವಟ್ಟಿಗೆ ಕಾರ್ಯಕ್ರಮಕ್ಕೆ ಸಹಕಾರ ನೀಡುವಂತಹ ವನಸಿರಿ ಫೌಂಡೇಶನ್ ರವರ ಕಾರ್ಯ ಶ್ಲಾಘನೀಯ ಪ್ರಶಂಶಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಲಿಂಗಪ್ಪ ಪಪ್ತಿ,ಪಡಿಯಪ್ಪ ಮುಶಿಗೇರಿ,ವಿಜಯಲಕ್ಷ್ಮಿ ಢವಳಗಿ, ನಾಗರಾಜ ಮಾಂಡ್ರೆ,ಶರಣಮ್ಮ ಮತ್ತು ಮಕ್ಕಳು ಹಾಜರಿದ್ದರು.
ಪೋಲಿಸ್ ಧ್ವಜ ದಿನಾಚರಣೆ ಶಿಸ್ತು, ಶೃದ್ಧೆ, ಕರ್ತವ್ಯನಿಷ್ಠೆ ಬೆಳೆಸಿಕೊಳ್ಳಿ-ಗುಡ್ಡಳ್ಳಿ